ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿ
ಸುಮ್ಮಾನದಿಂದ ಶ್ರೀಪತಿಯಲ್ಲಿ ತಾನಿರುವನು ನೆಲಸಿ
ಜನನ ಮರಣವಿಲ್ಲ ಉಣುವ ದುಃಖವಿಲ್ಲ
ಅನುಜ ತನುಜರಿಲ್ಲ ಅನುಮಾನವೇ ಇಲ್ಲ
ನಿದ್ದೆಯು ಅಲ್ಲಿಲ್ಲ ರೋಗರುಜಿನವಿಲ್ಲ
ಕ್ಷುದ್ರಜನಗಳಿಲ್ಲ ಸಮುದ್ರಶಯನ ಬಲ್ಲ
ಸಾಧುಜನರಕೂಡೆ ಸಾಧನೆಗಳ ಮಾಡೆ
ಪುರಂದರ ವಿಠಲ ಆದರಿಸುವನಲ್ಲೆ
ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿ
ಸುಮ್ಮಾನದಿಂದ ಶ್ರೀಪತಿಯಲ್ಲಿ ತಾನಿರುವನು ನೆಲಸಿ
ಜನನ ಮರಣವಿಲ್ಲ ಉಣುವ ದುಃಖವಿಲ್ಲ
ಅನುಜ ತನುಜರಿಲ್ಲ ಅನುಮಾನವೇ ಇಲ್ಲ
ನಿದ್ದೆಯು ಅಲ್ಲಿಲ್ಲ ರೋಗರುಜಿನವಿಲ್ಲ
ಕ್ಷುದ್ರಜನಗಳಿಲ್ಲ ಸಮುದ್ರಶಯನ ಬಲ್ಲ
ಸಾಧುಜನರಕೂಡೆ ಸಾಧನೆಗಳ ಮಾಡೆ
ಪುರಂದರ ವಿಠಲ ಆದರಿಸುವನಲ್ಲೆ