ಕೃಷ್ಣಾ ನೀ ಬೇಗನೆ ಬಾರೋ (Krishna nee begane baaro)

ಕೃಷ್ಣಾ ನೀ ಬೇಗನೆ ಬಾರೋಬೇಗನೆ ಬಾರೋ ಮುಖವನ್ನೆ ತೋರೋ ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರಕೊರಳೊಳು ಹಾಕಿದ ವೈಜಯಂತಿ ಮಾಲ ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ

ಯಾದವ ನೀ ಬಾ ಯದುಕುಲ ನಂದನ (Yadava neeba)

ಯಾದವ ನೀ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋಸೋದರಮಾವನ ಮಧುರೆಲಿ ಮಡುಹಿದಯಶೋದೆ ಕಂದ ನೀ ಬಾರೋ ಕಣ ಕಾಲಂದಿಗೆ ಘುಲುಘುಲು ಎನುತಲಿಝಣ ಝಣ ಎನುತಿಹ ನಾದಗಳುಚಿಣಿಕೋಲು ಚೆಂಡು ಬುಗುರಿಯನಾಡುತಸಣ್ಣವರೊಡಗೂಡಿ ನೀ ಬಾರೋ ಶಂಖ ಚಕ್ರವು ಕೈಯಲ್ಲಿ ಹೊಳೆಯುತಬಿಂಕದ ಗೋವಳ ನೀ ಬಾರೋಅಕಳಂಕ…

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (Kangalidyatako)

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದಕಸ್ತೂರಿ ರಂಗನ ನೋಡದ ||ಪ||ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ || ಅ.ಪ|| ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರಪುಷ್ಕರಣಿ ಸ್ನಾನವ ಮಾಡಿಆನಂದದಿಂದ ರಂಗನ ನೋಡದ ||1|| ಹರಿಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ…

ದೇವ ಬಂದಾನಮ್ಮ ಸ್ವಾಮಿ ಬಂದಾನೊ (Deva bandanamma )

ದೇವ ಬಂದಾನಮ್ಮ ಸ್ವಾಮಿ ಬಂದಾನೊದೇವರ ದೇವ ಶಿಖಾಮಣಿ ಬಂದಾನೊ ಉರಗಶಯನ ಬಂದ ಗರುಡಗಮನ ಬಂದನರಗೊಲಿದವ ಬಂದ ನಾರಾಯಣ ಬಂದಾನೊ ಮಂದರೋದ್ಧರ ಬಂದ ಮಾಮನೋಹರ ಬಂದವೃಂದಾವನಪತಿ ಗೋವಿಂದ ಬಂದಾನೊ ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದಾನೊ ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದಅಕ್ಷಯ…

ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿ (brahmandadolage arasi nodalu nammure vasi)

ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿಸುಮ್ಮಾನದಿಂದ ಶ್ರೀಪತಿಯಲ್ಲಿ ತಾನಿರುವನು ನೆಲಸಿ ಜನನ ಮರಣವಿಲ್ಲ ಉಣುವ ದುಃಖವಿಲ್ಲಅನುಜ ತನುಜರಿಲ್ಲ ಅನುಮಾನವೇ ಇಲ್ಲ ನಿದ್ದೆಯು ಅಲ್ಲಿಲ್ಲ ರೋಗರುಜಿನವಿಲ್ಲಕ್ಷುದ್ರಜನಗಳಿಲ್ಲ ಸಮುದ್ರಶಯನ ಬಲ್ಲ ಸಾಧುಜನರಕೂಡೆ ಸಾಧನೆಗಳ ಮಾಡೆಪುರಂದರ ವಿಠಲ ಆದರಿಸುವನಲ್ಲೆ

ಗಾನಕೆ ಸುಲಭವು ರಾಮ ನಾಮವು (Ganake Sulabhavu)

ಗಾನಕೆ ಸುಲಭವು ರಾಮ ನಾಮವುಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿಕೇಳುವರಿಗೆ ಅದು ಮೌಳಿಯ ನಾಮವುಘೋರಕಲುಷಗಳ ಪಾರುಗಾಣಿಸಿಮನಕೋರಿಕೆಗಳನೀವ ತಾರಕ ನಾಮವು ತಾಪಸ ಸತಿಯಳ ಶಾಪವ ಬಿಡಿಸಿದಭೋಪದಾಷರಥಿಯ…

ಎಂದೆಂದು ನಿನ್ನ ಪಾದವೆ ಗತಿಯೆನಗೆ (Endendu ninna padave gatiyenage)

ಎಂದೆಂದು ನಿನ್ನ ಪಾದವೆ ಗತಿಯೆನಗೆಗೋವಿಂದ ಬಾರಯ್ಯ ಎನ್ನ ಹೃದಯ ಮಂದಿರಕೆ ಮೊದಲಿಂದ ಬರಲಾರದೆ ನಾ ಬಂದೆಇದರಿಂದ ಗೆದ್ದು ಪೋಪುದು ಕಾಣೆ ಮುಂದೆತುದಿ ಮೊದಲಿಲ್ಲದೆ ಪರರಿಂದ ನೊಂದೆಪದುಮನಾಭನೆ ತಪ್ಪು ಕ್ಷಮೆ ಮಾಡು ತಂದೆ ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದುಪುಣ್ಯ ಪಾಪವನು ನಾ ತಿಳಿಯದೆ…

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ(Manavemba Markatanu)

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಗಳೆಂಬ ಶಾಖೆ ಶಾಖೆಗೆ ಹಾರಿ ವಿಶಯಂಗಳೆಂಬ ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತಿದೆ ನೋಡ ಮನವೆಂಬ ಮರ್ಕಟನ ನೆನಹೆಂಬ ಪಾಶದಿ ಕಟ್ಟಿ ಮನವೆಂಬ ಮರ್ಕಟನ ನಿಮ್ಮ ನೆನಹೆಂಬ ಪಾಶದಿ ಕಟ್ಟಿ ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರ