ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (Kangalidyatako)

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದಕಸ್ತೂರಿ ರಂಗನ ನೋಡದ ||ಪ||ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ || ಅ.ಪ|| ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರಪುಷ್ಕರಣಿ ಸ್ನಾನವ ಮಾಡಿಆನಂದದಿಂದ ರಂಗನ ನೋಡದ ||1|| ಹರಿಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ…

ದೇವ ಬಂದಾನಮ್ಮ ಸ್ವಾಮಿ ಬಂದಾನೊ (Deva bandanamma )

ದೇವ ಬಂದಾನಮ್ಮ ಸ್ವಾಮಿ ಬಂದಾನೊದೇವರ ದೇವ ಶಿಖಾಮಣಿ ಬಂದಾನೊ ಉರಗಶಯನ ಬಂದ ಗರುಡಗಮನ ಬಂದನರಗೊಲಿದವ ಬಂದ ನಾರಾಯಣ ಬಂದಾನೊ ಮಂದರೋದ್ಧರ ಬಂದ ಮಾಮನೋಹರ ಬಂದವೃಂದಾವನಪತಿ ಗೋವಿಂದ ಬಂದಾನೊ ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದಾನೊ ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದಅಕ್ಷಯ…

ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿ (brahmandadolage arasi nodalu nammure vasi)

ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿಸುಮ್ಮಾನದಿಂದ ಶ್ರೀಪತಿಯಲ್ಲಿ ತಾನಿರುವನು ನೆಲಸಿ ಜನನ ಮರಣವಿಲ್ಲ ಉಣುವ ದುಃಖವಿಲ್ಲಅನುಜ ತನುಜರಿಲ್ಲ ಅನುಮಾನವೇ ಇಲ್ಲ ನಿದ್ದೆಯು ಅಲ್ಲಿಲ್ಲ ರೋಗರುಜಿನವಿಲ್ಲಕ್ಷುದ್ರಜನಗಳಿಲ್ಲ ಸಮುದ್ರಶಯನ ಬಲ್ಲ ಸಾಧುಜನರಕೂಡೆ ಸಾಧನೆಗಳ ಮಾಡೆಪುರಂದರ ವಿಠಲ ಆದರಿಸುವನಲ್ಲೆ